ಕನ್ನಡಿಗರ ಪ್ರಜಾನುಡಿ
	
ಸುಯುಗ, ಹಾಗೂ ಇಪ್ಪತ್ತನೇ ಶತಮಾನದ ಪ್ರಾರಂಭದ ದಿನ, ಜನವರಿ 1. 2000ದಂದು. ಸಣ್ಣ ಪತ್ರಿಕೆಗಳ ತವರೂರು, ಬೀಡು ಎಂಬ ಹೆಸರಾದ ಮೈಸೂರು ನಗರದಲ್ಲಿ ಆಧುನಿಕ ತಂತ್ರಜ್ಞಾನ ಕಾಲಕ್ಕೆ ಹಾಗೂ ಅನುಗುಣಕ್ಕೆ ತಕ್ಕಂತೆ `ಕನ್ನಡಿಗರ ಪ್ರಜಾನುಡಿ ಹೆಸರಿನಲ್ಲಿ ಕನ್ನಡ ಮುಂಜಾನೆ ದೈನಂದಿನ ಪತ್ರಿಕೆಯು ಪ್ರಾರಂಭವಾಯಿತು. ಭಾಗ್ಯಾಂಜಲಿ ಪಬ್ಲಿಕೇಷನ್ ಎಂಬ ಸಂಸ್ಥೆಯ ಆಶ್ರಯದಲ್ಲಿ ಪ್ರಾರಂಭಗೊಂಡ ಪ್ರಜಾನುಡಿ ಪತ್ರಿಕೆಗೆ ಸ್ಫೂರ್ತಿ ಆ ಸಂಸ್ಥೆಯ ಅಧ್ಯಕ್ಷ ಹಾಗ ಮಲೀಕರಾದ ಡಾ. ಅಜಯ್ ಕುಮಾರ್.
	
ಮೂಲತಃ ಮೈಸೂರಿನಲ್ಲಿನ ಕೃಷ್ಣರಾಜ ನಗರಕ್ಕೆ ಸೇರಿದ ಓರ್ವ ಅನಿವಾಸಿ ಭಾರತೀಯರಾಗಿ ಎರಡು ದಶಕಗಳ ಕಾಲ ಅಮೇರಿಕಾದಲ್ಲಿ ಖ್ಯಾತ ಕ್ಯಾನ್ಸರ್ ತಜ್ಞರಾಗಿ ಸೇವೆ ಸಲ್ಲಿಸಿ ಇದೀಗ ಮೈಸೂರು ಹಾಗೂ ಬೆಂಗಳೂರನ್ನು ತಮ್ಮ ಸೇವಾಕ್ಷೇತ್ರವನ್ನಾಗಿ ಮಾಡಿಕೊಂಡ ಡಾ. ಅಜಯ್ ಕುಮಾರ್ ಕೆಲವೇ ತಿಂಗಳಲ್ಲಿ ಮೈಸೂರು ಚಾಮರಾಜನಗರ ಜಿಲ್ಲೆಗಳಲ್ಲಿ ಹಾಗೂ ಮಂಡ್ಯ ಜಿಲ್ಲೆಯ ಕೆಲವು ಭಾಗಗಳಲ್ಲಿ ಓದುಗರ ಮೆಚ್ಚುಗೆಯನ್ನು ಪಡೆಯುವಂತೆ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡರು. ಹೀಗಾಗಿ ಅದರ ಪ್ರಸಾರ 25000 ಸಂಖ್ಯೆಯಾಯಿತು. ಆದರೆ ಕೆಲವು ವೈಯಕ್ತಿಕ ಕಾರಣಗಳಿಂದಾಗಿ ಅಜಯ್ ಕುಮಾರ್‍ರವರು ಪತ್ರಿಕೆಯ ನಿರ್ವಹಣೆಯನ್ನು ಸುಮಾರು ಎರಡು ವರ್ಷ ಹತ್ತು ತಿಂಗಳ ಕಾಲಾನಂತರ ಮೈಸೂರು ನಗರದ ಮಾಜಿ ಮೇಯರ್ ಹಾಗೂ ವಿದ್ಯಾವಿಕಾಸ ಶಿಕ್ಷಣ ಸಂಸ್ಥೆಯ ಅಧ್ಯಕ್ಷರೂ ಆದ ವಾಸುರರವರಿಗೆ ವಹಿಸಿದರು. ವಾಸುರವರ ಮಾರ್ಗದರ್ಶನ ಹಾಗೂ ಮಾಲೀಕತ್ವದಲ್ಲಿ ಎಂಟು ಪುಟಗಳನ್ನೊಳಗೊಂಡ (ಶುಕ್ರವಾರ ಹಾಗೂ ಭಾನುವಾರ 12 ಪುಟಗಳು) ಪ್ರಜಾನುಡಿ ಮತ್ತಷ್ಟು ಜನಪ್ರಿಯತೆಯನ್ನುಗಳಿಸಿ ಮೇ 2005ರಲ್ಲಿ ಮಂಡ್ಯ ಜಿಲ್ಲೆ ಹಾಗೂ ಚಾಮರಾಜನಗರ ಜಿಲ್ಲೆಗಳ ಹೊಸ ಆವೃತ್ತಿಯನ್ನು ಪ್ರಾರಂಭಿಸಿ ಆ ಜಿಲ್ಲೆಯ ಸುದ್ದಿಗಳಿಗೆ ತಲಾ ಒಂದು ಪುಟವನ್ನು ಸೀಮಿತಗೊಳಿಸಲಾಗಿದೆ. ಇದೀಗ ಪ್ರಜಾನುಡಿಯ ಪ್ರಸಾರ ಸಂಖ್ಯೆ 36,200 ಪ್ರತಿಗಳಿಗೆ ವಿಸ್ರಣೆಗೊಂಡಿದೆ.
	
ಪ್ರಾರಂಭದ ದಿನಗಳಿಂದಲೂ ಡೆಕನ್ ಹೆರಾಲ್ಡ್ ಹಾಗೂ `ಪ್ರಜಾವಾಣಿ ಪತ್ರಿಕೆಗಳಲ್ಲಿ ನಾಲ್ಕು ದಶಕಗಳ ಕಾಲ ಸೇವೆ ಸಲ್ಲಿಸಿದ ಹಿರಿಯ ಪತ್ರಕರ್ತ ಕೃಷ್ಣವಟ್ಟಂರವರು ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದೇ ಸಂಸ್ಥೆಯ ಫೆಬ್ರುವರಿ 6, 2003ರಂದು ಮೈಸೂರು ಮೇಲ್ ಎಂಬ ಆಂಗ್ಲ ಸಂಜೆ ದಿನ ಪತ್ರಿಕೆಯನ್ನು ಪ್ರಾರಂಭಿಸಿ ಈ ಆಂಗ್ಲ ಪತ್ರಿಕೆಗೂ ಕೃಷ್ಣವಟ್ಟಂರವರೇ ಸಂಪಾದಕರಾಗಿರುತ್ತಾರೆ.					*

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ